ನಾವು ಚೆನ್ನಾಗಿ ಇರುವಾಗ ಕಷ್ಟ ಕಾಲದ ಬಗ್ಗೆ ಮರತೆ ಹೋಗ್ತೀವಿ ಅದೇ ನೋಡಿ ತೊಂದ್ರೆ. ಚೆನ್ನಾಗಿ ತಿಂದ್ರೆ ಹೊಟ್ಟೆ ಬರದೆ ಇರತ್ತ? ಪ್ರತಿಯೊಂದು ಶುರುವಿಗು ಅಂತ್ಯವಿದ್ದಂತೆ, ಪ್ರತಿ ಪ್ರಯಾಣಕ್ಕು ಅಂತ್ಯ ಇರತ್ತೆ. ಪ್ರಯಾಣ ಶುರುವಾಗುವಾಗ ಇರೋ ಮನಸ್ಥಿತಿ ಮುಗಿವಾಗ ಇರಲ್ಲ, ಹೋಗೋ ಸಮಯದಲ್ಲಿ ಕಣ್ಣಲ್ಲಿ ಕಂಬನಿ ಉಕ್ಕಿ ಬರತ್ತೆ, ಅದರ ಸುತ್ತ ಹೆಣೆದ ಕಥೆಯೇ ಈ ವಿದಾಯ.
ಬಂದೆನಾ ಬಹು ದೂರದಿ ಸೇರಲು ನಿನ್ನ ಮಡಿಲೊಳು ಒ ಸೂರ್ಯ ಹೋದೆಯಾ ಕಳೆದು ಮೋಡದ ಕಿಸೆಯೊಳು ಮತ್ತೆ ಬರುವೆನೆಂಬ ಮರಳಿ ನಾಳೆ ಬೀಗುತ ಗರ್ವದೊಳು ಅರಿಯೆ ನಾ ಸಿಲುಕಿರುವ ನೀ ಸಮಯದ ಬಂಧನದೊಳು
ಕಳೆದೆ ನಾ ಪ್ರತಿ ಕ್ಷಣವಾ ಈ ದಿನವೇ ನನ್ನ ಕಡೆ ದಿನದಂತೆ ಮಂಕು ಮನಸಿದು ಪುನಃ ಬಯಸಿವುದು ಕಾಲ ಕಳೆದಂತೆ ಹೇಳು ಹೋಗುವ ಮುನ್ನ ಆದೇ ಏಕೆನೀ ಬಿಸಿ ತುಪ್ಪದಂತೆ ಬಿಟ್ಟು ನನ್ನ ನಡು ದಾರಿಯಲಿ ಅರೆ ಬೆಂದ ಅನ್ನದಂತೆ
ಮನಸಿಲ್ಲದ ಮನಸಲ್ಲಿ ಹೇಳಬೇಕಿದೆ ನಾ ವಿದಾಯ ತಿಳಿದು ತಿಳಿದು ಘಾಸಿ ಗೊಂಡಿಹುದು ಈ ಹೃದಯ ದಣಿದ ಮನ ತಣಿಸದೆ ಕಾಣದು ಈ ಜೀವ ಕೊನೆಯ ಬಿಡದೆ ಹುಡುಕಿ ಬರುವೆ ಮರಳಿ ಕಂಡು ಉಪಾಯ