ಯಾವುದು ಸರಿ? ಯಾವುದು ತಪ್ಪು? ನನಗೆ ಸರಿ ಆದರೆ ಅಮ್ಮನಿಗೆ ತಪ್ಪು, ಅಪ್ಪನಿಗೆ ತಪ್ಪು. ಅಬ್ಬಾ!! ಆಗಲ್ಲ ಗುರು ಎಲ್ಲರನ್ನು ಖುಷಿ ಪಡಿಸೋಕೆ ಆಗಲ್ಲ. ಸರಿ ತಪ್ಪು ಅನ್ನೋದು ಪ್ರತಿಯೊಬ್ಬರ ದೃಷ್ಟಿಕೋನ ವಾಗಿರುತ್ತೆ, ಆಹ್ಹ್ ಇದೆಲ್ಲ ನನ್ನ ದೃಷ್ಟಿಕೋನವಾಗಿದೆ. ಈ ದೃಷ್ಟಿಕೋನದಲ್ಲಿ ಬರೆದ ಕೆಲವು ಕವಿತೆಗಳ ಕಿರು ಪರಿಚಯ.
ದಿನ ಓಡುವುದು ಗಳಿಗೆಯಂತೆ ಇದ್ದರೆ ಜೊತೆಗೆ ಇಲ್ಲವೋ ಅನಿಸುವುದು ದಿನಗಟ್ಟಲೆ ಪ್ರತಿ ಅರೆಘಳಿಗೆ ಹೇಳು ಏತಕೆ ಈ ಯಾತನೆಯ ಅನುಭವ ನನಗೆ ಅಗಿಹುದು ಪ್ರತಿ ವಿದಾಯದ ದಾರಿಯು ಹೊಸ ಭೇಟಿಗೆ
ಬಳಲಿ ಪರಿತಪ್ಪಿಸಿ ಕೂತಿರಲು ಇಳೆಯು ಪ್ರಿಯತಮೆಯ ನೋಡಲು ಇಣುಕಿದ ಆಗಸನು ಭೂಮಿಯಾಗಸದ ಸಲ್ಲಾಪವ ಕಂಡು ಮೊಡವು ಕ್ರೋಧದಿ ನುಂಗುತಾ ಇಬ್ಬರ, ಆವರಿಸಿ ಕತ್ತಲನು ನೊಂದ ಮನಸ್ಸುಗಳಿಗೆ ತುಂಬಲು ಹುರುಪನು ಮೋಡವ ಛೇದಿಸಿ ಬಂದನಾ ಮಿಂಚುತ್ತ ಇಂದ್ರನು
ಜಾಗವೋ ಜನವೋ ತಿಳಿಯೇ ನಾ ಸಣ್ಣ ಪುಟ್ಟ ಖುಷಿಗೆ ಸಂಬ್ರಿಮಿಸಿದೆ ನಾ ನಾನು ನಾನೇನ ಅನ್ನೋದೇ ಅನುಮಾನ ಬಿಟ್ಟಂತೆ ಭಾಸವಾಗುತ್ತಿದೆ ನಾ ಬಿಗುಮಾನ ಎಂದು ಇರದ ಹುರುಪ ಕಂಡೆ ನಾ ನನ್ನೊಳು ಜೀವಿಸಿದಂತೆ ಪ್ರತೀ ಕ್ಷಣವೂ ಹೊರಬಿಟ್ಟು ನನ್ನನು ಅರಿಯದ ಈ ಅನುಭವಕ್ಕೆ ಹೆಸರಾ ಇಡಲು ಬಹುದೇ ನಾನು ಬರವೆ ನಾ ಕಳೆದ ಗಳಿಗೆಗಳ ನನ್ನ ಜೀವನದ ಪುಟದೊಳು
ಅಲ್ಲಿರುವುದು ನಮ್ಮನೆ ಬಂದಿರುವೆ ಇಲ್ಲಿ ಸುಮ್ಮನೆ ಏನಿದು ಈ ಹೊಸ ಭಾವನೆ ಕಳೆದುಕೊಂಡು ನನ್ನ ನಾನೇ ಹೊರಟಂತಿದೆ ಮರಳಿ ಮನೆಗೆ
ಇಳಿ ಸಂಜೆ ವೇಳೆಯಲ್ಲಿ ಇಳಿದಂತೆ ಬೆಳಕು ನೀ ಬಿಟ್ಟು ಹೋದಂತೆ ಕವಿದು ಮುಸುಕು ಬೇಸರದಿ ಕ್ರೋದದಿ ಅಪ್ಪಳಿಸಿತು ಅಲೆಗಳು ಮೌನದಿ ಗೂಡಿನತ್ತ ಹಾರುತ ಹಕ್ಕುಗಳ ಹಿಂಡು ಮೌನ ಮುರಿದು ಅಳಲು ಸಾಗರ ಜುಳು ಜುಳು ಆಗಸದಿ ಬೆಳದಿಂಗಳು ನನ್ನೆದೆಯೋತ್ತಿ ತಬ್ಬಲು ತೇಲುತಿರಲು ನಾ ನಿನ್ನಾ ಗುಂಗೊಳು ಹಗಲಿರುಳು ತರಬಲ್ಲರೇ ಯಾರು ನನ್ನ ಮರಳಿ ನಿನ್ನೋರತು?
ಗರ್ಜಿಸುತ ಆರ್ಭಟಿಸುತ ಮೂಡಿ ಬಂದನಾ ಮೋಡ ಗಾಳಿಯ ಧೂಳಿಪಟಸುತ ರಬಸದಿ ದಿಕ್ಕಿಸುತ ಆಗೊ ಆಗೊ ನೋಡು ಆ ಚೆಂದದ ಕಾರ್ಮೋಡ ಭಾಯಾರಿದ್ದ ಭೂಮಿಗೀಗ ವರ್ಷದ ಮಜ್ಜನ
ಜೀವನವೇ ಒಂದು ದಾರಿಯಾಗಿರುವಗ ಅದರ ಕೊನೆಯ ಚಿಂತೆ ಏಕೆ ನೀನು ಅಂದುಕೊಂಡಿರುವುದು ಅದು ಕೊನೆಯಲ್ಲ ಕೇವಲ ತಿರುವು ಬಾಲೆ ಅಲೆಮಾರಿ ಜೀವನದ ಅವಿಭಾಜ್ಯ ಅಂಗ ಅಲೆದಾಟ ಅದಿಲ್ಲದೆ ಮುಕ್ತಿ ಸಿಕ್ಕೀತೇ ಕೊಟ್ಟು ಪಡೆಯುವ ಈ ಬಾಳಲ್ಲಿ ತುಸು ಸಮಯ ಸ್ವಾರ್ಥಿ ಆಗುವುದು ತಪ್ಪೇ ಯೋಚಿಸು ನೀ ಹುಟ್ಟಿರುವುದು ಒಂದೇ ಬಾರಿ, ಸಾಯದಿರು ಪ್ರತಿ ಬಾರಿ