ನಿಖಿಲಾರ್ಪಿತ

ಇದು ಒಂದು ಮದುವೆಯ ಕಥೆ, ಅರ್ಪಿತ ಕಲ್ಯಾಣ.
ನಿಮಗೆ ಗೊತ್ತಿರುವ ಹಾಗೆ ನಮ್ಮ ಕಡೆ ಮದ್ವೆ ಅಂದ್ರೆ ಏನೆಲ್ಲಾ ಪಚೀತಿ ಇರತ್ತೆ, ಅದ್ರಲ್ಲೂ ಹುಡುಗಿ ಮನಸಲ್ಲಿ ಇಲ್ಲದ ಗೊಂದಲ ತಳಮಳ.
ಅಂತಂದೊಂದು ಸನ್ನಿವೇಶ ನನ್ನಯ ಸ್ನೇಹಿತೆ ಅರ್ಪಿತಗೂ ಇತ್ತು, ಆಮೇಲೆ ಬಂದ ನೋಡಿ ರಾಜಕುಮಾರ ನಿಖಿಲ ಆಮೇಲೆ ಕಾಹಾನಿ ಮೆ ಟ್ವಿಸ್ಟ್, ಬಹಳ ಸಂಘರ್ಷಗಳ ನಂತರ,
ಅರ್ಪಿತ ನಿಖಿಲನ ಸಂಗಮವೇ ನಿಖಿಲಾರ್ಪಿತ

ಕೂಡಿ ಬಂದಿತ್ತಾ ಕಾಲ ಮದುವೆ ಎಂಬ ಊರಿನತ್ತ
ಬಂದರು ವರ ಪುತ್ರರು ವಧುವನ್ನು ಹರಸುತ್ತ
ಗೊಂದಲದ ಮನಸ್ಸಿನಲ್ಲಿ ಹೆದರಿ ಪಿಸುಗುಡುತ್ತ
ಬಂದ ವರಗಳ ನೋಡುತ್ತಾ ನಿಂತಳಾ ನಸು ನಗುತ್ತಾ

ಕಾಲ ಕಳೆದಂತೆ ಬೇಸತ್ತಳಾ ಮುದ್ದು ರಾಜುಕುಮರಿ
ಹೊಗಳಿಕೆ ತೆಗಳಿಕೆಗಳ ಮದ್ಯೆ ಉಬ್ಬಿ - ತಗ್ಗಿ, ಅರಳಿ - ಮುದುರಿ
ಉತ್ತರ ಕರ್ನಾಟಕದ ಗಿರ್ಮಿಟ್ಟನಂತೆ ಇದ್ದ ಕಿರು ಸುಂದರಿ
ಕಂಡರಿಯದ ಕುಟುಂಬವ ನೆನೆದು ಹೋದಳು ಚದುರಿ

ಮನದಲ್ಲಿ ಆಸೆಯೊತ್ತು ತನ್ನನ್ನು ತಾನೇ ಅರ್ಪಿಸಿ ಕೂತಳಾ ಮನೆಗಾಗಿ
ನಿಲ್ಲದ ಬ್ರಾಹ್ಮಣರ ಪರ್ಯಟನೆಯಲ್ಲಿ ಸೋತು ಸುಣ್ಣವಾಗಿ
ನಿರ್ಜನ ಮರುಭೂಮಿಯಲ್ಲಿ ಅಪೇಕ್ಷೆಯನೊತ್ತು ಅಲೆದು ಬಾಯಾರಿ
ಮಂಕಾದಳಾ ಪುಟ್ಟರಸಿ ಕೊನೆ ಸಿಗದ ಈ ಪಯಣದಿ ದಣಿವಾಗಿ

ಎತ್ತ ನೋಡಿದರತ್ತ ಇಂಧನ ಮುಗಿದ ಗಾಡಿಯಂತೆ ನಿಂತಿರುವ ಸಂಬಂಧಗಳು
ದಾರಿ ಕಂಡಂತೆ ಹೊಕ್ಕು ತನ್ನ ದಾರಿಯನೆ ಮರೆತು ಬಳಲಿ ಬೆಂಡಾಗಿಹಳು
ದಿಕ್ಕು ದೆಸೆ ತೋಚದೆ ಆಸೆ-ಆಕಾಂಕ್ಷೆಯ ಮೂಟೆಯನ್ನು ಪಕ್ಕಕಿರಿಸಿಹಳು
ವರ್ಷ ಸ್ಪರ್ಶಕ್ಕೆ ಕಾದ ಮರುಭೂಮಿಯಂತೆ ಅರ್ಧಾಂಗಿಯ ಬಯಸಿಹಳು

ಪೂರ್ವದಿ ಸೂರ್ಯನು ಕತ್ತಲೆ ಸೀಳಿ ಬಂದಂತೆ ಧರೆಗೆ ಬಿಸಿ ಅಪ್ಪುಗೆಯಾಗಿ
ಕಗ್ಗತಲ ಮುರಿಯಲೆಂದೆ ಬಂದನಾ ಚಂದಿರ ತಿಳಿ ಬೆಳದಿಂಗಳಾಗಿ
ಮಾಯಾ ಕುದುರಿ ಹತ್ತಿ ಬರಲು ಚದುರಿ ಮೊಬ್ಬು ಮುಸುಕು ಒಂದೊಂದಾಗಿ
ಮೊಗದೊಳು ನಗೆ ತೊಟ್ಟು ಹೆಗಲೊಳು ಅಸೆ ಮೂಟೆ ಯೊತ್ತು ಭರವಸೆಯ ಬೆಳಕಾಗಿ
ಬಂದನಾ ನಿಖಿಲನು ಅರ್ಪಿತೆಯ ಯಕ್ಷ ಪ್ರಶ್ನೆಗೆ ಸವಿ ಉತ್ತರವಾಗಿ

ಸೃಷ್ಟಿಯೇ ಎಂದು ಹೇಳಿದರು ಕೇಳಿರದ ಎಂದೂ ಕಂಡರಿಯದ ಅಪೂರ್ವ ಸಂಗಮವೇ ನಿಖಿಲಾರ್ಪಿತ❣️
Nikhil(Complete) Arpita(Dedicate) - Dedicated completely
ಶುಭುಂ