ಮನುಷ್ಯ ಅಲೆಮಾರಿ ಅಂತಾರೆ, ಕೆಲವು ಬಾರಿ ದಾರಿ ಮೊದಲೇ ಇರತ್ತೆ, ಕೆಲವು ಬಾರಿ ಹೊಸ ದಾರಿನೇ ಹಿಡಿಬೇಕು. ಇದೊಂಥರಾ ಬಸ್ಸ್ ಹತ್ತಿ ನಮ್ಮ ಜಾಗ ತಲುಪಿದ ಮೇಲೆ ಇಳಿದು ಹೋಗಲೇ ಬೇಕು. ಇದು ನನ್ನ ದೃಷ್ಟಿಕೋನ ನೀನು ಏನೇ ಮಾಡು, ನೀನು ಎನ್ ಮಾಡ್ತಿದ್ಯ ಅನ್ನೋ ಅರಿವು ನಿನಗೆ ಇರಬೇಕು. ಈ ಮನಸ್ಥಿತಿಯಲ್ಲಿ ಹರಿದ ಕವಿತೆಯೇ ಈ ಕಲ್ಲು- ನೀರು, ಹರಿವ ನೀರಿನ ಹಾಗೂ ಮದ್ಯೆ ಸಿಗುವ ಕಲ್ಲಿನ ಜೊತೆ ನಡೆಯುವ ಸಂಭಾಷಣೆ ಇಲ್ಲಿದೆ ನೋಡಿ
ಅಡವಿಯ ನಡುವಲಿ ಹರಿವ ನೀರು ನಾ ನನ್ನೀ ಪಯನದಿ ಸಿಕ್ಕ ಚಿಕ್ಕ ತಡೆಯು ನೀ ಹರಿದು ಹೋಗಲು ಹಂಬಲಿಸಿದೆ ನಾ ತಡೆದು ನಿಲ್ಲಿಸುವ ತವಕದಲ್ಲಿರುವೆ ನೀ
ನಾ ಬರಲು ರಬಸದಿ ಹರಿದು ಹಳ್ಳ ಕಂಡಲ್ಲಿ ತಬ್ಬಿದೆ ಏಕೆ ನನ್ನನು ನೀನು ಕಂಡು ಕಂಡಲ್ಲಿ ಆಗಿದೆ ಏರಿಳಿತ ಜುಳು ಜುಳು ನನ್ನುಸಿರನಲ್ಲಿ ನಿನ್ನ ಆಹ್ ಸವಿ ಸ್ಪರ್ಷಕೆ ಮೂಡಿದೆ ನೆರಿಗೆಯು ನನ್ನೆದೆಯಲಿ ನಿನ್ನ ಆಲಿಂಗನಕೆ ಹುಟ್ಟಿದೆ ಗುಳ್ಳೆಗಳು ನನ್ನಲ್ಲಿ ನೋಡಿಬಿಡು ನನ್ನ ಹೊಡೆಯುವ ಮುನ್ನಾ ಕ್ಷಣಗಳಲ್ಲಿ
ಸೇರುವ ತನಕ ನಾ ಕಡಲ, ನೆನಪಿಡುವೆ ನಿನ್ನನು ಇದರಲ್ಲಿ ತಪ್ಪಿದ್ದರೆ ಮರೆಯದೆ ಕ್ಷಮಿಸಿ ಬಿಡು ನನ್ನನು ನಿನ್ನ ಹೊರ ಕೊಳೆಯ ತೊಳೆಯ ಬಹುದೆ ಹೊರತು ನಾನು ನಿನ್ನೊಳ ಹೊಕ್ಕು ಇರಲಾರೆನು, ಅದ ಅರಿತಿರುವೆ ನೀನು
ನಾ ಕರೆದೊಯ್ಯ ಬಲ್ಲೆ ಒಣಗಿ ಉದುರಿದ ತರಗೆಲೆಯನು ಬರಲೊಲ್ಲೆ ನೀ ನನ್ನೊಡನೆ ಅರಿಯೆ ನಾ ನಿನ್ನ ಕಾರಣಗಳನು ಇರಲು ಆಗದು ನನಗೆ, ಹೇಳಿ ಕೇಳಿ ಅಲೆಮಾರಿ ನಾನು ಇದ ಅರಿತು ಹಠವ ತೊರೆದು ಕಳಿಸಿ ಕೊಡು ಇನ್ನು ನನ್ನನು