ಸಾಗರದೊಡಗಿನ ಸೆಣಸಾಟ


ಮನುಷ್ಯ ಕೆಲವು ಬಾರಿ ತನ್ನ ಎದುರಾಳಿ ಯಾರು,
ಅವರ ಶಕ್ತಿ ಏನು? ನನ್ನ ಮಿತಿ ಏನು ಎಂಬುದರ ಬಗ್ಗೆ ಅರಿಯುವುದು ತುಂಬಾ ಅವಶ್ಯಕ.
ಇದು ಗೋಕರ್ಣದಲ್ಲಿ ನಡೆದ ನೈಜ್ಯ ಘಟನೆ, ಭೋಗರೇವ ಸಮುದ್ರದೊಡನೆ ಏಳು ಮಂದಿಯ ಸೆಣಸಾಟ ಇದರ ಸುತ್ತ ಹೆಣೆದ ಕಥೆ.

ಗರ್ವದಿ ಸಾಗರದಲೆಯ ಛೇದಿಸಿ ನುಗ್ಗುತ್ತ ಮುಳುಗೆಳುತ
ಮಜವೆಂಬ ಅಮಲಿನಲ್ಲಿ ಹಾರುತ, ತೇಲಾಡುತ
ಮಿತಿ ಮೀರಿ, ಮಲಗಿದ್ದ ಕಡಲ ಎಬ್ಬಿಸಿ ಹೊರಟರು ಒಡಲೊಳು
ಇದ ಕಂಡ ತೀರವು ಭಯಗೊಂಡು ಮೊರೆ ಹೋಯಿತು ಜವರಾಯನ ಕೇಳಲು

ಬಂದನಾ ಜವರಾಯ ಮೃತ್ಯುಕೂಪವಿಡಿದು
ಕಂಡೊಡನೆ ಮೃತ್ಯುವ ಹೆದರಿ ಆದರು ದಿಕ್ಕಾಪಾಲು
ಬದುಕುವ ತವಕದಿ ಆಹಾಯಕಥೆ ಇಂದ ಜಿಗಿಯಲು
ಮಕ್ಕಳ ನರಲಾಟವ ತಾಳಲಾರದೆ ಬಿಚ್ಚಿಟ್ಟು ತನ್ನೊಡಲನು
ದಡವ ಸೇರಿ ಬಿಟ್ಟತು ನಿಟ್ಟುಸಿರು ಬಡ ಜೀವವು

ಸೆಣಸಾಟದಲಿ, ಸೋತವವರಾರು? ಗೆದ್ದವರಾರು?
ಸೋತು ಗೆದ್ದವರಾರು? ಈ ಮೂರು ದಿನದ ಬಾಳಲಿ