ಹೇಳ್ತಾರೆ ಜನ, ಹೋಗ್ತಿರೋ ಜಾಗಕ್ಕಿಂತ, ಹೋಗೋ ದಾರಿನೇ ತುಂಬಾ ಇಷ್ಟ ಆಗತ್ತೆ ಅಂತ. ಅದೇ ರೀತಿ ನಮ್ಮ ಹೀರೋಗೂ ಒಂದು ಇನ್ಸಿಡೆಂಟ್ ಆಗಿದೆ, ಅದೇನ್ ಅಂತೀರಾ? ಕಥೆ ಕೇಳಿ, ಈ ಬಸ್ ನಮ್ಮೂರಿಗೆ ಹೋಗಲ್ಲ ಅಂತ ಗೊತ್ತಿದ್ರೂ ತುಸು ದೂರ ಬಸ್ ಹತ್ತಿ ಜರ್ನಿ ಎಕ್ಸ್ಪೀರಿಯೆನ್ಸ್ ಹೇಳ್ತಿದಾನೆ ನಮ್ಮ ಹೀರೋ ನೀವೇ ಕೇಳಿ...
ಬಂದೆ ನೀ ಬಾಳಲಿ ಜೊತೆಯಾಗಿ ತುಸು ದೂರ ನೀ ಸೂಜಿಯಂತಾದರೆ, ನಾ ಅದರೊಳು ಸಿಕ್ಕ ದಾರ ತಲುಪುವ ಜಾಗಕ್ಕಿಂತ ನಡೆದ ಹಾದಿಯೇ ಸುಂದರ ಜೊತೆಗಿದ್ದ ಪ್ರತೀ ಕ್ಷಣಗಳು ಎದೆಂದು ಸುಮಧುರ
ತಿಳಿದಿತ್ತು ನನಗೆ ಎಂದಿಗೂ ಇದು ಸಮಯ ನಿಮಿತ್ತ ಆದರೂ ಮರೆಯೆ ನಾ ನೀ ಕೊಟ್ಟ ಆದರದ ತುತ್ತ ಖುಷಿ ಇದೆ ನನಗೆ ನನ್ನರಸಿ ಸೇರುತಿಹಳು ಸರಿ ಗೂಡಿನತ್ತ ಆದರೂ ಹೃದಯ ಬಾರವೆನಿಸುಹುದು ಮರೆಯಲು ನೀ ಕೊಟ್ಟ ಮುತ್ತ
ಆರಿಯನೆ ನಾ ನಿನ್ನ ತಳಮಳ ಮದುವೆ ಎಂಬ ಬಸ್ಸಿನೊಳು ತಿಳಿದಿದೆ ನನಗೆ, ಹತ್ತಿ ಭಾಗಿ ಆಗಲಾರೆನು ಪಯಣದೊಳು ಪ್ರಯಾಣಿಸಿ ತಂದೆ ನೀ ಸಂತಸ, ನನ್ನಿ ಈ ಜೀವನ ಪುಟದೊಳು ಸಾಕೆಗೆನಗೆ ಈ ಕಿರು ಸಂಚಲನ ಸ್ಮರಿಸಲು ಹಗಲಿರುಳು
ತಿಳಿಯದಿರು ನಾ ಘಾಸಿ ಗೊಂಡಿಹನೆಂದು ಈ ಬಂದಕೆ ಇಲ್ಲ ಬೆಲೆ ಪಾವತ್ತಿಸುತ್ತಿರುವೆ, ನಾ ಕಂಡ ಕಿರು ಚಿತ್ರಕೆ ಹೇಳು ಬೀಳದೆ ಇರುವರು ಯಾರು? ನಿನ್ನೀ ನೋಟಕೆ ಆಶ್ಚರ್ಯವಿಲ್ಲ ಬಂದರು ಹತ್ತೂರಿನ ರಾಜನು ನಿನ್ನೋಲಿಕೆಗೆ
ಬಂದಾಗಿದೆ ಕಾಲ ನನ್ನ ಮುದ್ದಿಯ ಬೀಳ್ಕೊಡುಗೆಗೆ ಆಭಾರಿ ನಾ ನಿನಗೆ, ನನ್ನ ತಡೆದ ನಿನಗೆ ಇಲ್ಲಿವರೆಗೆ ಸುಖಕರವಾಗಿರಲಿ ನಿನ್ನ ನಿನ್ನವನ ಜೀವನ ಕೊನೆವರೆಗೆ ಖುಷಿ ಪಡುವೆನ ನಾ ದೂರದಿ ನೋಡಿ ನಿಮ್ಮೆಡೆಗೆ