ದಾಂಡೇಲಿ ದಾರಿ


ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲೋ ಸೇರತ್ತೆ ನದಿಗಳು ಸೇರೋದು ಸಾಗರದಲ್ಲಿ.
ಹಾಗೆ ಆಯ್ತು ಈ ಸಂಗಮ, ಯಾವ ಸಂಗಮ ಅಂತೀರಾ?
ಒಬ್ಬ ಬೆಳಗಾವಿ ಹುಡುಗ, ಒಬ್ಬ ಮೈಸೂರು, ಒಬ್ಬಳು ಧಾರವಾಡ, ಕೆಲವರು ಬೆಂಗಳೂರು.
ಯಾವುದೋ ಜಾತಿ, ಯಾವುದೋ ಕುಲ ಆದ್ರೆ ಸ್ನೇಹಕ್ಕೆ ಯಾವುದೇ ಬೇದ ಭಾವ ಇರಲ್ಲ ಅಂತಾರೆ,
ನಿಜನೆ ಇರ್ಬೇಕು ಬೇರೆ ಭಾಷೆ, ಬೇರೆ ಸೊಗಡು, ಬೇರೆ ಮನೆತನ ಯಾವುದು ಅಡ್ಡ ಬರ್ಲಿಲ್ಲ, ಅಂತ ಒಂದು ಪ್ರಯಾಣ.
ಅಶ್ವಿನಿ, ಅಫ್ತಾಬ್, ಹರ್ಷ, ಆನಂದ್, ದಿವ್ಯಶ್ರೀ, ಸುಷ್ಮಾ, ಅರವಿಂದ, ಐಶ್ವರ್ಯ ಇವರೊಟ್ಟಿಗೆ ನಾ ನೆಡೆದ ಹಾದಿಯೇ ದಾಂಡೇಲಿಯ ದಾರಿ.

ಹಸಿದ ತನುವ ದಣಿದ ಮನವ ತಣಿಸಿದ ಪುಣ್ಯಾತ್ಮ
ಬಾಯ್ಬಿಟ್ಟು ಹೇಳಬೇಕಿಲ್ಲ ನೀ ಹೆಸರಿಗಷ್ಟೇ ಅಲ್ಲ ಸುಷ್ಮಾ

ಬದಲಾವಣೆ ಜಗದ ನಿಯಮ ಆಯಿತು ಹೊಸ ಸಂಗಮ
ಈ ದಿವ್ಯ ಬಂಧಕೆ ಸಾಕ್ಷಿ ಅದ ದಿವ್ಯ ನಿನಗೆ ಯಾರು ಸಮ

ಕೆಸರಿನೊಳು ಅರಳಿದ ಅರವಿಂದನಂತೆ
ಬೆಸೆದವು ಸಂಬಂಧಗಳು ಮೃದು ಪುಷ್ಪದಂತೆ

ತಾಯಿಯ ಮಡಿಲೊಳು ನಲಿದಂತೆ ಕಂದಮ್ಮ
ಹರಿವ ಕಾಳಿಗೆ ಮೈಯೊಡ್ಡಲು ಹರ್ಷ ಸಂಬ್ರಮ

ಬೇಸತ್ತ ವರುಷದಿ ಪವಿತ್ರ ಅಶ್ವಿನಿ ನಕ್ಷತ್ರ ಮಿನುಗಿದ ಹಾಗೆ
ರಂಜಿಸುತಾ ತುಂಬುತ್ತಾ ಹುರುಪನು ಹಸಿದ ಯುವಕರಿಗೆ

ಓಡುವ ನದಿ ಸಾಗರ ಸೇರಿ ಕುಣಿದು ಆನಂದಿಸಿದ ಹಾಗೆ
ರಬಸಧಿ ಕೊಚ್ಚಲು ದೇಹವ ಆ ಮಜವ ನಾ ಹೇಳಲಿ ಹೇಗೆ

ಜೀವನದ ಈ ಓಟದಿ ಹೊರಟ ದಾರಿಯೇ ಚೆಂದವಂತೆ
ಕಳೆದ ಈ ಕ್ಷಣಗಳೆ ಒಂದು ಕಿರು ಐಶ್ವರ್ಯವಿದ್ದಂತೆ

ಸಮಯ ಕಳೆದು ಇಳಿಯಲು ಅಫ್ತಾಬನು ಪಶ್ಚಿಮದೊಳು
ಬಿಟ್ಟು ಈ ಸುoದರ ಕ್ಷಣವ ತೆರಳಿ ಮರಳಿ ಗೂಡೊಳು