ವಾತಾವಣದಲ್ಲಿ ಬದಲಾಣೆಯಾದರೆ ನಮ್ಮ ಮನಸ್ಥಿತಿ ಕೂಡ ಬದಲಾಗುತ್ತೆ ಅಂತಾರೆ, ನಂಗೂ ಹಂಗೆ ಅನ್ಸತ್ತೆ ಅದಿಕ್ಕೆ ಆಗಾಗ ಹೊರಗಡೆ ಹೋಗ್ತಾ ಇರ್ತೀನಿ, ಜೊತೆಗೆ ಇನ್ನೊಂದು ಮಾತಿದೆ, ಜಾಗ ಯಾವುದೇ ಇರಲಿ ನೀವು ಹೋಗ್ತಾ ಇರೋ ಸಂಗಡ ಚೆನ್ನಾಗಿದೆ ಪ್ರಯಾಣ ಚೆನ್ನಾಗೇ ಆಗತ್ತೆ ಅಂತ. 2021ರ ತಿಂಗಳಂದು ಏಳು ಜನರ ಗುಂಪೊಂದು ಉತ್ತರಾಖಂಡದಲ್ಲಿರುವ ಚಂದ್ರಶಿಲಾ ಚಾರಣದಲ್ಲಿ ಆದ ಅನುಭವ ಸಾರ ಇಲ್ಲಿದೆ. ಜಗತ್ತಿನ ಅತೀ ಎತ್ತರದ ಜಾಗದಲ್ಲಿ ಶಿವನ ದೇವಾಲಯ ಇಲ್ಲಿದೆ ಎಂಬುದು ಇದರ ಖ್ಯಾತಿ.
ಓಡುತಿರಲು ಬದುಕು ಸಮಯದ ಬಂಡಿಯಲ್ಲಿ ಮುಳುಗಿ ಪ್ರತಿಯೊಬ್ಬರೂ ಹಗಲಿರುಳು ಜಂಜಾಟದಲ್ಲಿ ಹೊರಟಿತ್ತು ಗುಂಪೊಂದು ದೂರ ಪಯಣವೊಂದರಲ್ಲಿ ಮಳೆಯು ಪಟ ಪಟನೆ ಜಟಿಸುತಿರಲು ಹೋದು ಹೋದಲ್ಲಿ
ಲಯವಿಲ್ಲದ ಜೀವನದಲ್ಲಿ ಲಯವ ಬಯಸಿ ಹೊಕ್ಕು ಹಿಮಲಯದೊಳು ಕಂಡರಿಯದ ಅನುಭವಕ್ಕೆ ತಡಬಡಿಸಿ ಒಳಗೊಳಗೆ ಮನಸಿನೊಳು ಇಳೆಯು ವರುಣನ ಆಲಿಂಗನವ ಬಿಗಿದಪ್ಪಿ ಬಾಚಿ ತನ್ನೋಡೊಲೊಳು ಬಾಸವಾಗುತಿಹುದು ಪ್ರಕೃತಿ ತಬ್ಬಿ ಹಿಡಿದಂತೆ ನನ್ನ ತನ್ನ ಹಸಿರ ಸೆರಗೊಳು
ಹೊರಟನ ರವಿಯು ತನ್ನ ಕಾಯವ ಇಳಿಬಿಟ್ಟು ಹಿಂದೆಯೇ ಬಂದನಾ ಚಂದ್ರ ಅಗಲವಾದ ಬೊಟ್ಟಿಟ್ಟು ಹುಚ್ಚು ತುಂಟ ಮನಸಿದು ಬಂದಿದೆ ನಗರವ ಬಿಟ್ಟು ಕಾಣಲು ಚಂದ್ರಶಿಲೆಯ ಸಿರಿ ಸೌಂದರ್ಯ ಸಂಪತ್ತು
ಇಳಿಸಂಜೆ ಹಬೆಯು ಚುಂಬಿಸಲು ನಡುಗಿತ ಮೈಮನ ದಣಿದ ಮನಕಿದು ಹೇಳಿಯೂ ತೀರದ ಸವಿ ಕಂಪನ ನೈಜ್ಯ ಜೀವನವ ಮರೆತು ಆದೆ ಅಲೆಮಾರಿಯಂತೆ ನಾ ಪರ್ವತವೇರಿ ಹಿಮ ಮಂಜಿನ ಸ್ಪರ್ಶ ನೆನೆದು ಮಲಗಿದೆ ನಾ ಆದಿನ
ಎತ್ತ ನೋಡಿದರತ್ತ ಎದೆ ಏರಿಸಿ ನಿಂತಿರುವ ಶಿಕರ ಹೆಗಳೊಳು ಹೊರಬೇಕಿದೆ ನಮ್ಮ ನಮ್ಮಯ ಭಾರ ಕಳ್ಳ ದೇಹ ನನದು ಏರಲು ಪಡುತಿಹದು ತತ್ತರ ತುಂಟ ಮನಸಿದು ದನಿಸಿದೆ ನನ್ನನು ಬಯಸಿ ಅಪಾರ
ಹೆಜ್ಜೆ ಇಟ್ಟಂತೆಯೆ ಗಿಡ ಗಂಟೆ ಬಿಘಿ ದಪ್ಪಿ ಎಳೆದಂತೆ ನಡುಗುತಿಹುದು ತನುವು ಚಳಿ ಗಾಳಿ ಎರಚಿದಂತೆ ಬೇವರುತಿದೆ ಕಾಯ ಚುಟು ಚುಟು ಪ್ರತಿ ಹೆಜ್ಜೆಯಂತೆ ಆಹ್ ಕ್ಷಣ ಕಂಡೆ ನನ್ನ ಬದುಕ ನಾನೇ ಮಾದರಿಯಂತೆ
ಯಾರೋ ಹೇಳಿದ್ದ ಕೇಳಿದ್ದೆ ನಂಬಿಕೆಯೇ ಜೀವನ ಇಂದು ಅದರಂತೆ ನಡೆದೆ ನಾ ನನ್ನ ನಡೆಯನ್ನ ತಿಳಿಯದ ಜಾಗದಿ ತಿಳಿಯದ ಕುಲದಿ ತಿಳಿಯಾದೆ ನಾ ಒಂದು ಬಾರಿ ಕೇಳಿಕೊಂಡೆ ನನ್ನನು ನಾನೆ ಇದು ನಾನೇ ನಾ
ಅಗೋ ಅಗೋ ನೋಡು ಕುಳಿತಿಹನು ಶಂಕರ ತಲೆಯ ಮೇಲೆ ಇರಿಸಿಕೊಂಡು ಕಿರು ಚಂದಿರ ಬಂದಿರುವೆ ಬಳಲಿ ಬೆಂಡಾಗಿ ಎಲ್ಲ ಪ್ರಕಾರ ಸಿಗಲೇಬೇಕು ಸೂರ್ಯ ಉದಯಿಸುವ ನೇರ ಪ್ರಸಾರ
ಪರ್ವತದ ಏರಿಳಿತಕೆ ನಾ ಅಳಲು ಗಳಗಳನೆ ನಾ ಕುಗ್ಗಲು ಜೊತೆಗಿರಲು ನನ್ನ ಇನಿಯ ಕೊಟ್ಟು ತನ್ನೆಗಲನೆ ನನ್ನ ಜೀವನದ ಪುಟಗಳಲ್ಲಿ ಸೇರಿತು ಈ ಪರ್ಯಟನೆ ನಾ ಎದೆ ಒತ್ತಿ ಹೇಳುವೆ ಇದು ನಾ ಮಾಡಿದ ಸಂಪಾದನೆ
ನಾ ಕಾದ ಆ ಅಮೃತ ಕ್ಷಣಕೀಗ ಕ್ಷಣಗಣನೆ ಮೊಗದೊಳು ನಗುತೊಟ್ಟು ಇಡೀ ಪರ್ವತವನ್ನೇ ಮಾಡಿದಂತೆ ಸಂಪಾದನೆ ಬರಲು ರವಿಯು ಹೇಳಲು ನನಗೆ ಶುಭಕಾಮನೆ ನಿಟ್ಟುಸಿರು ಬಿಟ್ಟು ನಿಂತೆ ಮರೆತು ನನ್ನ ಅಸ್ತಿತ್ವವನ್ನೆ
ಹೇಳಿಯೂ ತೀರದು ನಾ ಕಂಡ ಅಮೋಘ ಪ್ರಪಂಚವ ವರ್ಣಿಸಲು ಸಾದ್ಯವೇ ನಾ ಕಳೆದ ಅದ್ಬುತ ಕ್ಷಣವ ಮರೆಯಲು ಬಹುದೆ ನನ್ನೊಳಗೊಕ್ಕ ಆ ಸುಂದರ ಸಂಚಲನವ ನೆನೆದು ನೆನೆದು ಕಳೆವೆ ಇನ್ನುಳಿದ ನನ್ನೀ ಜೀವವ